18 Nov 2021 | 1 min Read
Medically reviewed by
Author | Articles
ಬಹಳಷ್ಟು ಗಂಡ-ಹೆಂಡತಿಯರು ನಾವು ಇಲ್ಲದೆ ಬಂಜೆತನವನ್ನು ಅನುಭವಿಸುತ್ತದೆ. ಅವರ ಪಾಲಿಗೆ ಐವಿಎಫ್ ತಂತ್ರಜ್ಞಾನ ಆಶಾಕಿರಣ.
ಬಹಳಷ್ಟು ವರ್ಷಗಳಿಂದ ಬಂಜೆತನದಿಂದ ಅನುಭವಿಸುತ್ತಿರುವ ದಂಪತಿಗಳು ಕೆಲವು ಸಲ ತಮಗೂ ಮಕ್ಕಳಾಗುತ್ತದೆ ಎಂಬ ಸಾಮರ್ಥ್ಯವನ್ನು ಮರೆತು ಹೋಗುತ್ತಾರೆ. ಅಕ್ಷರಶಃ ಅವರೆಲ್ಲರ ಪಾಲಿಗೆ ಐವಿಎಫ್ ತಂತ್ರಜ್ಞಾನ ತುಂಬಾ ಭರವಸೆಯ ಒಂದು ಚಿಕಿತ್ಸಾ ವಿಧಾನ. ಇದನ್ನ ಬಹಳಷ್ಟು ದಂಪತಿಗಳು ಮರೆತು ಹೋಗಿರುತ್ತಾರೆ. ಅದರ ಜೊತೆಗೆ ಚಿಕಿತ್ಸೆಯು ಹೆಚ್ಚು ವೆಚ್ಚವೆಂದು ಭಾವಿಸುತ್ತಾರೆ. ಹಾಗಾಗಿ ಆಸ್ಪತ್ರೆಯ ಕಡೆ ಮುಖ ಮಾಡುವುದನ್ನು ಬಿಟ್ಟು ದಿನ ಮಕ್ಕಳಿಲ್ಲ ಎಂಬ ಕೊರಗಿನಲ್ಲಿ ಜೀವನವನ್ನು ಸಾಗಿಸುತ್ತಾರೆ.
ಐವಿಎಫ್ ತಂತ್ರಜ್ಞಾನದಲ್ಲಿ ಮೊದಲು ಸಂಗಾತಿಗಳಿಬ್ಬರ ಅಂಡಾಣು ಮತ್ತು ವೀರ್ಯಾಣು ಸಂಗ್ರಹಿಸಲಾಗುವುದು. ಅದನ್ನು ನಿಗದಿತ ಅವಧಿಯ ವರೆಗೆ ಪ್ರಯೋಗಾಲಯದಲ್ಲಿ ಒಂದು ವರದಿ ತಾಪಮಾನದಲ್ಲಿ ಇಡಲಾಗುವುದು. ಆನಂತರ ಮೊಟ್ಟೆಯನ್ನು ಹೆಣ್ಣಿನ ಗರ್ಭಕೋಶಕ್ಕೆ ಬಿಡಲಾಗುವುದು. ಈ ಸಂಪೂರ್ಣ ಚಕ್ರ ನೆರವೇರಲು ಮೂರು ವಾರಗಳಾದರೂ ಬೇಕಾಗುತ್ತದೆ. ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಅವಧಿ ಆದರೂ ಆಗಬಹುದು. ತಂತ್ರಜ್ಞಾನವು ಬಹಳ ಪರಿಣಾಮಕಾರಿಯಾದ ಜನನ ಪ್ರಕ್ರಿಯೆ. ಒಂದು ಉತ್ತಮ ಫಲಿತಾಂಶಗಳು ಬರಬೇಕಾದರೆ, ಹಲವಾರು ಬಾರಿ ಪ್ರಯೋಗಾಲಯದಲ್ಲಿ ಕೆಲವು ಮೊಟ್ಟೆ ಮತ್ತು ವೀರ್ಯಾಣುವನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಮಹಿಳೆಯ ವಯಸ್ಸು, ಬಂಜೆತನದ ಕಾರಣ, ಪರಿಸರದ ಮೇಲೆ ಅವಲಂಬಿಸಿರುತ್ತದೆ. ಉತ್ತಮ ಫಲಿತಾಂಶ ಸಿಕ್ಕಿದರೆ ಅವಳಿ, ತ್ರಿವಳಿ ಮಕ್ಕಳ ಜನನ ಕೂಡ ಆಗಬಹುದು.
ಐವಿಎಫ್ ತಂತ್ರಜ್ಞಾನ ಯಾರಿಗೆ ಉಪಯೋಗ
ಈ ಮೇಲಿನ ಕಾರಣಗಳಿರುವಾಗ ತಂತ್ರಜ್ಞಾನದ ಮೂಲಕ ಬಂಜೆತನವನ್ನು ಹೋಗಲಾಡಿಸಬಹುದು.
ಚಿಕಿತ್ಸೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು.
ಗರ್ಭಕೋಶದ ಸ್ಥಾನದ ಪರೀಕ್ಷೆ :- ನಿಮ್ಮ ಮೊಟ್ಟೆಯ ಗುಣಮಟ್ಟವನ್ನು ಮತ್ತು ಸಾಂದ್ರತೆಯನ್ನು ಅಳೆಯಲು ವೈದ್ಯರು ಮೊದಲೇ ಈ ಪರೀಕ್ಷೆಯನ್ನು ಮಾಡುತ್ತಾರೆ. ಎಫ್ ಎಸ್ ಹೆಚ್ , ಈಸ್ಟ್ರೋಜನ್ ಹಾರ್ಮೋನ್, ರೋಗನಿರೋಧಕ ಹಾರ್ಮೋನ್ ರಕ್ತಪರೀಕ್ಷೆಯಲ್ಲಿ ಕೆಲವು ದಿನಗಳವರೆಗೆ ಮಾಡಲಾಗುತ್ತದೆ. ಕೆಲವೊಮ್ಮೆ ಅಲ್ಟ್ರಾಸೌಂಡ ಮೂಲಕ ನಿಮ್ಮ ಗರ್ಭಕೋಶದ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಇದರಿಂದ ಮೊಟ್ಟೆಯ ಜನನಕ್ಕೆ ನಿಮ್ಮ ಗರ್ಭಕೋಶ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದು ತಿಳಿಯಲಾಗುವುದು.
ಸೀಮನ್ ಅನಾಲಿಸಿಸ್:- ಐವಿಎಫ್ ಚಿಕಿತ್ಸೆಯ ಚಕ್ರ ಆರಂಭಿಸುವ ಮೊದಲು ಇದನ್ನು ಪರೀಕ್ಷೆ ಮಾಡಲಾಗುವುದು.
ಸೋಂಕುಕಾರಕ ಕಾಯಿಲೆಯ ಪರೀಕ್ಷೆ:- ನಿಮ್ಮ ಮತ್ತು ನಿಮ್ಮ ಸಂಗಾತಿಯ ರಕ್ತದ ಮಾದರಿಯನ್ನು ತೆಗೆದುಕೊಂಡು ಸೋಂಕು ಹರಡುವಿಕೆ ಕಾಯಿಲೆಯ ಪರೀಕ್ಷೆಯನ್ನು ನಡೆಸಲಾಗುವುದು. ಉದಾಹರಣೆಗೆ ಎಚ್ಐವಿ
ಎಂಬ್ರಿಯೋ ವರ್ಗಾವಣೆ ಪರೀಕ್ಷೆ:- ಗರ್ಭಕೋಶದ ಆಳವನ್ನು ಅಳೆಯಲು ಮತ್ತು ಎಂಬುದನ್ನು ಸುರಕ್ಷಿತ ಸ್ಥಾನದಲ್ಲಿ ಇಟ್ಟಾಗ ಅನುವು ಮಾಡಿಕೊಡುವ ಬಗ್ಗೆ ಈ ಪರೀಕ್ಷೆಯನ್ನು ನಡೆಸಲಾಗುವುದು.
ಗರ್ಭಕೋಶದ ಪರಿಶೀಲನೆ:- ಐಪಿಎಸ್ ಪರೀಕ್ಷೆ ಮಾಡುವುದಕ್ಕೆ ಮೊದಲು ನಿಮ್ಮ ಗರ್ಭಕೋಶದ ಪದರವನ್ನು ಪರಿಶೀಲಿಸಲಾಗುವುದು.
ಎಷ್ಟು ಭ್ರೂಣವನ್ನು ವರ್ಗಾಯಿಸಲಾಗುತ್ತದೆ:- ಭ್ರೂಣವನ್ನು ವರ್ಗಾಯಿಸುವ ಮೊದಲು ಅವರ ವಯಸ್ಸನ್ನು ಪರಿಗಣಿಸಲಾಗುವುದು. ಎಷ್ಟು ಪ್ರಮಾಣದಲ್ಲಿ ಮೊಟ್ಟೆ ಬಿಡುಗಡೆಯಾಗಿದೆ ಎಂಬುದರ ಆಧಾರದ ಮೇಲೆ ಮತ್ತು ವಯಸ್ಸಿನ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಮೊಟ್ಟೆಯನ್ನು ದಾನ ಮಾಡಿದ ಕೆಲವು ಪ್ರಕರಣಗಳಲ್ಲಿ ಇದನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಬಹು ಗರ್ಭಧಾರಣೆಯನ್ನು ಹೇಗೆ ನಿಭಾಯಿಸುವುದು:- ಕೆಲವು ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಭ್ರೂಣಗಳು ಗರ್ಭಕೋಶಕ್ಕೆ ವರ್ಗಾಯಿಸಿದಾಗ, ಅಂದರೆ ತಂತ್ರಜ್ಞಾನದಲ್ಲಿ ಯಾವುದಾದರೂ ಒಂದು ಉತ್ತಮ ಫಲಿತಾಂಶ ಕೊಡಲೆಂದು ಎರಡರಿಂದ ಮೂರು ಗುರುವಿನ ವರ್ಗಾಯಿಸಲಾಗುತ್ತದೆ. ತಾಯಿಯ ಆರೋಗ್ಯದ ಆಧಾರದ ಮೇಲೆ ವರ್ಗಾವಣೆಯಾದ ಎಲ್ಲಾ ಭ್ರೂಣವು ಉತ್ತಮ ಬೆಳವಣಿಗೆ ಕಂಡು ಅವಳಿ ತ್ರಿವಳಿ ಜನನಕ್ಕೆ ಕಾರಣವಾಗುತ್ತದೆ. ಕೆಲವರಲ್ಲಿ ಇದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
ಮೊಟ್ಟೆಯ ಬಿಡುಗಡೆ ಹೇಗೆ
ಐವಿಎಫ್ ತಂತ್ರಜ್ಞಾನದಲ್ಲಿ ಸಾಮಾನ್ಯವಾಗಿ ಮಳೆ ಮಹಿಳೆಯು ಋತುಸ್ರಾವವಾದ ಬಳಿಕ ಒಂದರಿಂದ ಎರಡು ಮೊಟ್ಟೆ ಬಿಡುಗಡೆಯಾಗುತ್ತದೆ. ಆದರೆ ಐವಿಎಫ್ ತಂತ್ರಜ್ಞಾನದಲ್ಲಿ ಮಹಿಳೆಯು ಹೆಚ್ಚು ಮೊಟ್ಟೆಯನ್ನು ಬಿಡುಗಡೆ ಮಾಡುವ ಹಾಗೆ ಉತ್ತೇಜನ ನೀಡಲಾಗುತ್ತದೆ. ಇದರ ನೇರ ಪರಿಣಾಮ ಹಾರ್ಮೋನಿನ ಮೇಲಾಗುತ್ತದೆ. ಎಫ್ ಎಸ್ ಹೆಚ್ ಹಾರ್ಮೋನ್ ಇದರಲ್ಲಿ ಮುಖ್ಯ ಪಾತ್ರವಹಿಸುತ್ತದೆ.
ಔಷಧೋಪಚಾರದ ಕ್ರಮ :- ನಿಮ್ಮ ಋತುಸ್ರಾವದ ಎಂಟರಿಂದ ಹದಿನಾಲ್ಕನೆಯ ದಿನ ಮೊಟ್ಟೆ ಬಿಡುಗಡೆ ಸಮಯ. ಹೆಚ್ ಸಿ ಜಿ ಪರೀಕ್ಷೆಯ ಮೂಲಕ ಮೊಟ್ಟೆಯ ಬೆಳವಣಿಗೆಯನ್ನು ಪ್ರೇರೇಪಿಸಲಾಗುತ್ತದೆ.
ಅವಧಿಗೆ ಮುನ್ನ ಮೊಟ್ಟೆಯ ಬೆಳವಣಿಗೆಯನ್ನು ತಡೆಯಲು ಔಷಧಿ: ಇದರಲ್ಲಿ ಅವಧಿಗೆ ಮುನ್ನ ನಿಮ್ಮ ದೇಹ ಮೊಟ್ಟೆಯನ್ನು ಬಿಡುಗಡೆ ಮಾಡುವುದು ತಪ್ಪಿಸಲಾಗುತ್ತದೆ.
ಗರ್ಭಕೋಶದ ಪದರಕ್ಕೆ ಔಷಧಿ :- ಒಮ್ಮೆ ಭ್ರೂಣವನ್ನು ನಿಮ್ಮ ಗರ್ಭಕೋಶಕ್ಕೆ ವರ್ಗಾಯಿಸಿದ ಮೇಲೆ ನಿಮ್ಮ ವೈದ್ಯರು ಪ್ರೊಜೆಸ್ಟರಾನ್ ಹಾರ್ಮೋನಿನ ಸಪ್ಲಿಮೆಂಟ್ ಅನ್ನು ಸೇವಿಸಲು ಹೇಳಬಹುದು. ಇದರಿಂದ ನಿಮ್ಮ ಗರ್ಭಕೋಶದ ಪದರವು ಭ್ರೂಣದ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ.
ಮೊಟ್ಟೆಯ ಸಂಗ್ರಹ
ವೀರ್ಯಾಣುವಿನ ಸಂಗ್ರಹ
ವಿಧಾನ ಹೇಗೆ
ಐವಿ ಎಫ್ ನಂತರ ಆರೋಗ್ಯಕರ ಮಗುವಿಗೆ ಜನನ ನೀಡಬಹುದು. ಕೆಲವು ಅಂಶಗಳನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು.
ಬಂಜೆತನ ನಿವಾರಿಸಲು ಐವಿ ಎಫ್ ತಂತ್ರಜ್ಞಾನದ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ನಿಮ್ಮ ಪ್ರತಿಕ್ರಿಯೆ ನೀಡಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.