15 Nov 2021 | 1 min Read
Medically reviewed by
Author | Articles
“ಗರ್ಭಧಾರಣೆಯ ಲಕ್ಷಣಗಳಲ್ಲಿ ಹಲವಾರು ರೀತಿಗಳಲ್ಲಿ ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಹಾರ್ಮೋನಿನ ಏರುಪೇರು.”
ಬಹಳಷ್ಟು ಮಹಿಳೆಯರಲ್ಲಿ ಮಾಸಿಕ ಚಕ್ರ ಮಿಸ್ ಆದ ತಕ್ಷಣ ಗರ್ಭಧಾರಣೆಯ ಲಕ್ಷಣಗಳು ಕಂಡುಬರುತ್ತದೆ ವ್ಯಕ್ತಿಗಳಿಂದ ವ್ಯಕ್ತಿಗೆ ಇದು ವ್ಯತ್ಯಾಸವಿರುತ್ತದೆ. ಹಾಗಾಗಿ `
ಗರ್ಭಾವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು
ಈ ಎಲ್ಲಾ ಲಕ್ಷಣಗಳು ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಕಂಡುಬರುತ್ತದೆ. ದೇಹದಿಂದ ದೇಹಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರುತ್ತದೆ. ಒಬ್ಬರಿಗೆ ಬಂದ ಲಕ್ಷಣಗಳು ಇನ್ನೊಬ್ಬರಿಗೆ ಕಾಣಿಸಬೇಕೆಂದು ಏನು ಇಲ್ಲ. ಎಲ್ಲ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ತಪಾಸಣೆ ಮಾಡಿಕೊಳ್ಳಬೇಕು.
ಎಲ್ಲಾ ತಿಂಗಳುಗಳಲ್ಲಿ ಈ ಎಲ್ಲಾ ಲಕ್ಷಣಗಳು ಕಾಣಿಸುವುದಿಲ್ಲ. ಕೆಲವರಿಗೆ ವಾಂತಿ ಒಂಬತ್ತು ತಿಂಗಳವರೆಗೆ ಇರುತ್ತದೆ. ಕೆಲವರಿಗೆ ಇರುವುದೇ ಇಲ್ಲ.
ಗರ್ಭಾವಸ್ಥೆಯ ಪರೀಕ್ಷೆ ಎಂದರೇನು
ಮೊದಲ ಬಾರಿಗೆ ಮುಟ್ಟು ನಿಂತು ಒಂದು ವಾರ ಕಳೆದ ಮೇಲೆ, ಕೆಲವೊಂದು ಲಕ್ಷಣಗಳು ನಿಮ್ಮನ್ನು ಆವರಿಸಿದರೆ ನೀವು ಗರ್ಭವತಿ ಇಲ್ಲವೇ ಎಂದು ಪರಿಶೀಲಿಸಲು ಗರ್ಭಿಣಿಯರ ಪರೀಕ್ಷೆ ನಡೆಯುತ್ತದೆ. ಅರ್ಥಾತ್ ಈ ಪರೀಕ್ಷೆಯ ಮೂಲಕವೇ ಗರ್ಭ ನಿಂತಿರುವುದು ತಿಳಿಯುತ್ತದೆ. ಮೂತ್ರದ ಅಥವಾ ರಕ್ತ ಪರೀಕ್ಷೆಯ ಮೂಲಕ ಕಂಡುಹಿಡಿಯಲಾಗುತ್ತದೆ. ಮಹಿಳೆಯ ದೇಹದಲ್ಲಿ ಹೆಚ್ ಸಿ ಜಿ ಪರೀಕ್ಷೆಯ ಮೂಲಕ ಇದನ್ನು ತಿಳಿಯಲಾಗುವುದು. ಇದು ಹಾರ್ಮೋನ್ ಆಗಿದ್ದು ಪ್ಲೆಸೆಂಟಾ ಎಲ್ಲಿ ಕಂಡುಬರುತ್ತದೆ. ಗರ್ಭಧಾರಣೆ ಯಾಗಿ ಹತ್ತು ದಿವಸಕ್ಕೆ ಹೆಚ್ ಸಿ ಜಿ ಯು ಮಟ್ಟವನ್ನು ಅಳೆಯ ಲಾಗುವುದು. ಮೊದಲ 60 ದಿನಗಳಲ್ಲಿ ಎರಡು ದಿನಕ್ಕೊಮ್ಮೆ ಅದರ ಮಟ್ಟ ದುಪ್ಪಟ್ಟಾಗುತ್ತದೆ. ನುರಿತ ತಜ್ಞರಿಂದ, ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಯನ್ನು ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಗಳು ಮನೆಯಲ್ಲಿ ನಡೆಯುತ್ತವೆ. ಗರ್ಭನಿಂತು ಒಂದು ವಾರದ ಬಳಿಕ ಮೆಡಿಕಲ್ ಶಾಪ್ ನಲ್ಲಿ ಸಿಗುವ ಪ್ರೆಗ್ನೆನ್ಸಿ ಟೆಸ್ಟ್ ಗಳನ್ನು ತಂದು ಮನೆಯಲ್ಲಿ ಮಾಡಲಾಗುವುದು. ಟೆಸ್ಟ್ ಮಾಡುವ ವಿಧಾನವು ಅದರಲ್ಲಿ ಹೇಳಿರುತ್ತಾರೆ. ಇದು ಬಹಳಷ್ಟು ಪರಿಣಾಮಕಾರಿಯಾಗಿ ಫಲಿತಾಂಶವನ್ನು ನೀಡುತ್ತದೆ.
ಗರ್ಭಧಾರಣೆಯ ಅವಧಿಯಲ್ಲಿ ಕೆಲವು ಸಾಮಾನ್ಯ ಪರೀಕ್ಷೆಗಳು ನಡೆಯುತ್ತವೆ.
ಮೊದಲ ತ್ರೈಮಾಸಿಕದ ಪರೀಕ್ಷೆ:
ಸ್ಕ್ಯಾನಿಂಗ್ ಮೂಲಕ ಭ್ರೂಣದ ಬೆಳವಣಿಗೆಯನ್ನು ಕಂಡು ಹಿಡಿಯಲಾಗುವುದು. ಇದರಿಂದ ಭ್ರೂಣದ ಬೆಳವಣಿಗೆ, ಏನಾದ ಲೋಪದೋಷಗಳು ಇದ್ದರೆ ತಿಳಿಯುತ್ತದೆ. ಇದನ್ನೇ ಸ್ಕ್ರೀನಿಂಗ್ ಟೆಸ್ಟ್ ಎಂದು ಕರೆಯುತ್ತಾರೆ.
ಎನ್ ಟಿ ಟೆಸ್ಟ್:
ನಾಚಲ್ ಟ್ರಾನ್ಸ್ ಲೂಯೆನ್ಸಿ ಸ್ಕ್ರೀನಿಂಗ್ ಈ ಪರೀಕ್ಷೆಯನ್ನು ಮಗುವಿನ ಕತ್ತಿನ ಹಿಂಭಾಗದಲ್ಲಿ ಸಂಗ್ರಹಗೊಂಡಿರುವ ದ್ರವದ ಅಥವಾ ಸಾಂದ್ರತೆಯನ್ನು ಕಂಡುಹಿಡಿಯಲು ಬಳಸುತ್ತಾರೆ.
ರಕ್ತಪರೀಕ್ಷೆ:
ಪ್ಲಾಸ್ಮ ಪ್ರೋಟೀನ್ ಗರ್ಭಧಾರಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ (ಪಿಎಪಿಪಿ-ಎ):- ಪ್ಲಾಸೆಂಟಾ ದಿಂದ ಸೇವಿಸಲ್ಪಡುವ ಪ್ರೊಟೀನ್ ಅಂಶ ಗರ್ಭಧಾರಣೆಗೂ ಮೊದಲು ಅಸ್ತಿತ್ವದಲ್ಲಿರುತ್ತದೆ. ಪ್ರೋಟೀನ್ ಪ್ರಮಾಣ ಹೆಚ್ಚಾಗಿದ್ದರೆ ವರ್ಣತಂತುಗಳ ಸಮಸ್ಯೆ ಎದುರಾಗುತ್ತದೆ.
ಹೆಚ್ ಸಿ ಜಿ ಪರೀಕ್ಷೆ:
ಪ್ಲಾಸೆಂಟಾ ದಿಂದ ಸೇವಿಸಲ್ಪಟ್ಟ ಹಾರ್ಮೋನ್ ಹೆಚ್ ಸಿ ಜಿ. ಪ್ರಮಾಣ ಹೆಚ್ಚಾಗಿ ಸ್ರವಿಕೆ ಯಾದಾಗ ವರ್ಣತಂತುವಿನ ತೊಡಕು ಎದುರಾಗುತ್ತದೆ. ಇದರ ಪ್ರಮಾಣದಿಂದ ಭ್ರೂಣದ ಬೆಳವಣಿಗೆ ಸಮರ್ಪಕವಾಗಿ ಆಗುತ್ತಿದೆಯೇ ಅಥವಾ ಡೌನ್ ಸಿಂದ್ರೋಮೆ ತುತ್ತಾಗಿದೆ ಯೇ ಅಥವಾ ಅನುವಂಶೀಯ ಕಾಯಿಲೆಗಳಿಗೆ ತುತ್ತಾಗಿ ಎಂಬುದು ತಿಳಿಯುತ್ತದೆ.
ಎರಡನೆಯ ತಾಯಿ ಮಾಸಿಕದ ಪರೀಕ್ಷೆಗಳು:
ಎರಡನೆಯ ತ್ರೈಮಾಸಿಕದ ಪರೀಕ್ಷೆಯಲ್ಲಿ ಸ್ಕ್ಯಾನಿಂಗ್ ನ ಜೊತೆಗೆ ಹಲವಾರು ರೀತಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗುವುದು. ಇದನ್ನು ಬಹುವಿಧದ ಮಾರ್ಕರ್ ಎಂದು ಕರೆಯುತ್ತಾರೆ. ಕೆಲವು ಮಹಿಳೆಯರಲ್ಲಿ ಅನುವಂಶಿಯವಾಗಿ ಕಂಡುಬರುವ ಪ್ರಕರಣ ಮತ್ತು ಮಗುವಿನ ಜನನಕ್ಕೆ ಸಂಬಂಧಿಸಿದಂತೆ, ಅಂತ ರಿಸ್ಕ್ ಫ್ಯಾಕ್ಟರ್ ಅನ್ನು ಮೊದಲೇ ತಿಳಿಯಲಾಗುವುದು. ಅಗ್ನಿ ಇದರಿಂದ 20 ವಾರಗಳ ಅಂತರದಲ್ಲಿ ಹಲವಾರು ಬಾರಿ ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷಿಸಲಾಗುವುದು. 16ನೇ ಮತ್ತು 18ನೇ ವಾರದಲ್ಲಿ ಸ್ಥಿರತೆ. ಮಾರ್ಕರ್ ಪರೀಕ್ಷೆಯನ್ನು ಈ ಕೆಳಗಿನಂತೆ ಹೆಸರಿಸಲಾಗಿದೆ.
ಆಲ್ಫಾ ಫೋಟೋ ಪ್ರೋಟೀನ್ ಸ್ಕ್ರೀನಿಂಗ್ (ಎ ಎಫ್ ಪಿ):
ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ರಕ್ತದಲ್ಲಿರುವ ಆಲ್ಫಾ ಫೋಟೋ ಪ್ರೋಟಿನ್ ಅಂಶವನ್ನು ಅಳೆಯಲಾಗುವುದು. ಈ ಪರೀಕ್ಷೆಯನ್ನು ಭ್ರೂಣದ ಯಕೃತ್ತಿನಿಂದ ಮಾಡಲಾದ ಪ್ರೋಟೀನ್ ಅಂಶದಿಂದ ಕಂಡುಹಿಡಿಯಲಾಗುತ್ತದೆ. ಭ್ರೂಣದ ಸುತ್ತ ಇರುವ ಅಮ್ನಿಯಾಟಿಕ್ ದ್ರವವು ಪ್ಲಾಸೆಂಟಾದಿಂದ ರಕ್ತವನ್ನು ಸೇರುತ್ತದೆ.
ಇತರೆ ಮಾರ್ಕರ್ ಪರೀಕ್ಷೆ
ಹೆಚ್ ಸಿ ಜಿ – ಪ್ಲಾಸೆಂಟಾ ದಲ್ಲಿರುವ ಹಾರ್ಮೋನ್
ಎಸ್ಟ್ರಿಯೋಲ್ – ಇದೊಂದು ಹಾರ್ಮೋನ್ ಆಗಿದ್ದು. ಪ್ಲಾಸೆಂಟಾ ದಿಂದಾಗಿದೆ.
ಇನ್ ಹಿಬಿನ್ :– ಇದು ಕೂಡ ಒಂದು ಹಾರ್ಮೋನ್. ಪ್ಲಾಸೆಂಟಾ ದಿಂದಾಗಿದೇ.
ಸ್ಕ್ರೀನಿಂಗ್ ನಲ್ಲಿ ಇದೆಲ್ಲ ಹಾರ್ಮೋನಿನ ಮಟ್ಟವನ್ನು ಕಂಡುಹಿಡಿಯಲಾಗುವುದು.
ಅಮ್ನಿಯೋಸೆಂಟ್ರಿಸಿಸ್
ಇದು ಭ್ರೂಣದ ಸುತ್ತ ಇರುವ ಅಮ್ನಿಯಾಟಿಕ ದ್ರವದ ಮಾದರಿಯನ್ನು ತೆಗೆದು ವರ್ಣತಂತು ಮತ್ತು ಇತರ ಅನುವಂಶೀಯ ಸಮಸ್ಯೆಗಳನ್ನು ಕಂಡುಹಿಡಿಯಲಾಗುವುದು.
ಸಿ ವಿ ಎಸ್
ಪ್ಲಾಸೆಂಟಾ ದ ಟಿಶ್ಯೂ ವಿಗೆ ಮಾಡುವ ಪರೀಕ್ಷೆ ಇದಾಗಿದೆ. ಮಗುವಿನ ಅನುವಂಶೀಯತೆ ಗುಣವನ್ನು ಅರಿಯಲಾಗುವುದು. ಕುಟುಂಬದ ಇತಿಹಾಸವನ್ನು ಕಲೆ ಹಾಕಿ ಆನಂತರ ಈ ಪರೀಕ್ಷೆ ಮಾಡಲಾಗುವುದು.
ಗ್ಲೂಕೋಸ್ ಟೆಸ್ಟ್
ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್ ಸಾಮಾನ್ಯವಾಗಿ ಮಧುಮೇಹ ಇದೆಯೇ ಎಂದು ತಿಳಿಯಲು ಮಾಡುತ್ತಾರೆ. ಇದನ್ನು ಮಾಡುವುದರ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಪತ್ತೆ ಮಾಡಲಾಗುವುದು.
ಒಟ್ಟಾರೆ ಪರೀಕ್ಷೆಗಳು
ಈ ಎಲ್ಲಾ ಪರೀಕ್ಷೆಯನ್ನು ಅರಿಯಲು ಗರ್ಭಾವಸ್ಥೆಯಲ್ಲಿ ಎಲ್ಲಾ ಬಗೆಯ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಲೇಖನ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.