ಸಿ-ಸೆಕ್ಷನ್ ಮತ್ತು ಆರೈಕೆ

ಸಿ-ಸೆಕ್ಷನ್ ಮತ್ತು ಆರೈಕೆ

14 Nov 2021 | 1 min Read

Medically reviewed by

Author | Articles

ಬಹಳಷ್ಟು ಮಹಿಳೆಯರಲ್ಲಿ ಸಿ-ಸೆಕ್ಷನ್ ಬಗ್ಗೆ ಗೊಂದಲವಿದೆ. ಸಿ-ಸೆಕ್ಷನ್ ಮಗುವಿನ ಪ್ರಸವಕ್ಕೆ ಮತ್ತೊಂದು ವಿಧಾನ. ಸಿ-ಸೆಕ್ಷನ್ ಬಗೆಗೆ ನಿಮ್ಮ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಕೆಲವು ಮುಂಜಾಗ್ರತೆಯ ಕ್ರಮ, ಮತ್ತು ಆರೈಕೆಯ ಮಾಹಿತಿಯನ್ನು ಬೇಬಿಚಕ್ರ ನಿಮಗಾಗಿ ನೀಡುತ್ತಿದೆ.

ಪ್ರತೀ ಹೆಣ್ಣಿಗೆ ಮಗುವಿನ ಆಗಮನ ಬಹುದಿನದ ಕನಸು, ನಿರೀಕ್ಷೆ. ಅದಕ್ಕೆ ಸರಿಯಾಗಿ ನವಮಾಸದವರೆಗೆ ಮಗು ಆಕೆಯ ಗರ್ಭದಲ್ಲಿ ಬೆಳೆಯುವಾಗ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ. ಇನ್ನೇನು ಮಗು ಕೆಲವೇ ದಿನಗಳಲ್ಲಿ ಹೊರಜಗತ್ತಿಗೆ ಕಾಲಿಡುತ್ತದೆ ಎಂಬುದನ್ನು ಊಹಿಸಿಕೊಂಡೆ ಪುಳಕಗೊಳ್ಳುತ್ತಾಳೆ. ಪ್ರತೀ ಮಾಡದ ತಪಾಸಣೆಯಲ್ಲಿ ವೈದ್ಯರು ಮುಂದೇನು ಹೇಳುತ್ತಾರೋ ಎಂಬ ಆತಂಕ ಆಕೆಯಲ್ಲಿ ಮನೆ ಮಾಡಿರುತ್ತದೆ. ಈ ಎಲ್ಲಾ ಗೊಂದಲಗಳಿಂದ ಆಕೆಗೆ ಸಮಾಧಾನ ಸಿಗುವಂತಾಗುವುದು ಮಗುವಿನ ಚಲನ ವಲನ ಆಕೆಯ ಸ್ಪರ್ಶಕ್ಕೆ ಬಂದಾಗ. ಹೌದು .. ಆಕೆಯ ಕನಸಿನ ಕುಡಿ ಮಗು ಆಕೆಗೆ ಪ್ರತಿಕ್ರಿಯೆ ನೀಡುವಾಗ ಸ್ವರ್ಗವೇ ಕೆಳಗಿಳಿದು ಬಂದಂತೆ ಸಂತೋಷ ಪಡುತ್ತಾಳೆ .

ಸಿ ಸೆಕ್ಷನ್ ಯಾವಾಗ ಮಾಡುತ್ತಾರೆ:

ನಿಮ್ಮ ಮಗು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ,
ಸರಿಯಾದ ಸಮಯಕ್ಕೆ ಮಗು ಜನಿಸದಿದ್ದರೆ,
ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ
ಮಗುವಿಗೆ ಹೊಕ್ಕಳು ಬಳ್ಳಿ ಸುಟ್ತ್ತಿಕೊಂಡಿದ್ದರೆ
ಮಗುವಿನ ಸುತ್ತ ಇರುವ ಆಮ್ನಿಯಾಟಿಕಾ ಫ್ಲೂಯಿಡ್ ಪೂರ್ಣ ಅವಧಿಯ ಸಂದರ್ಭ ಬತ್ತಿ ಹೋದರೆ,
ಬಿಪಿ ಹೆಚ್ಚಾದಾಗ
ಇನ್ನಿತರ ಸಂಧರ್ಭಗಳಲ್ಲಿ

ಈ ಮೇಲಿನ ಯಾವುದೇ ಸಂದರ್ಭಗಳಲ್ಲಿ ವೈದ್ಯರು ನಿಮಗೆ ತಕ್ಷಣ ಸಿಸೇರಿಯನ್ ಹೆರಿಗೆ ಮಾಡುತ್ತಾರೆ. ಇದನ್ನು ಸಾಮಾನ್ಯವಾಗಿ ಸಿ-ಸೆಕ್ಷನ್ ಎಂದು ಕರೆಯಲಾಗುತ್ತದೆ. ಸಿ-ಸೆಕ್ಷನ್ ಹೆರಿಗೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರೆತೆಗೆಯುತ್ತಾರೆ. ಈ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಮೂಲಕ ಅಥವಾ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರಜಗತ್ತಿಗೆ ಕರೆತರಲಾಗುವುದು. ಶಸ್ತ್ರಚಿಕಿತ್ಸೆಯ ನಂತರ ಆ ಭಾಗದಲ್ಲಿ ಗಾಯದ ಗುರುತು ಇರುತ್ತದೆ. ಆದರೆ ಈ ಗಾಯವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು ಹೆಚ್ಚಿನ ಮಹಿಳೆಯರಿಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಆ ಗಾಯ ಹೇಗಿರುತ್ತದೆ? ಅದನ್ನು ಹೇಗೆ ಆರೈಕೆ ಮಾಡಬೇಕು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಸಿ-ಸೆಕ್ಷನ್ ನಲ್ಲಿ ಬಿಕಿನಿ ಕಟ್:
ಸಿ-ಸೆಕ್ಷನ್ ಹೆರಿಗೆ ಸಂದರ್ಭದಲ್ಲಿ ವೈದ್ಯರು ಕ್ಲಾಸಿಕ್ ಕಟ್ ಅಂದರೆ ಲಂಬವಾಗಿ ಕಟ್ ಮಾಡಬಹುದು ಅಥವಾ ನಿಮ್ಮ ಕೆಳ ಹೊಟ್ಟೆ ಭಾಗದಲ್ಲಿ ಬಿಕಿನಿ ಕಟ್ ಅಂದರೆ ಅಡ್ಡಲಾಗಿ ಕತ್ತರಿಸಿ ಮಗು ಹೊರತೆಗೆಯುತ್ತಾರೆ. ಇತ್ತೀಚೆಗೆ ನಮ್ಮಲ್ಲಿ ಬಿಕಿನಿ ಕಟ್ ಹೆಚ್ಚು ಜನಪ್ರಿಯವಾಗಿದೆ. ಕೆಲವೊಮ್ಮೆ ಇದಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಏಕೆಂದರೆ ಈ ವಿಧಾನದಲ್ಲಿ ನೋವಿನ ತೀವ್ರತೆ ತುಂಬಾ ಕಡಿಮೆ ಇರುತ್ತದೆ. ಅಲ್ಲದೇ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಗಾಯಾ ವಾಸಿಯಾದ ಬಳಿಕ ಬಿಕಿನಿ ಕಟ್ ಮಸುಕು ಮಸುಕಾಗಿ ಕಾಣುತ್ತದೆ. ಬಿಕಿನಿ ಕಟ್ಗೆ ಹೋಲಿಸಿದರೆ, ಕ್ಲಾಸಿಕ್ ಕಟ್ನಲ್ಲಿ ನೋವಿನ ತೀವ್ರತೆ ಸ್ವಲ್ಪ ಜಾಸ್ತಿ. ಹಾಗೆಯೇ ಗಾಯವು ಸೀಳಿನ ಹಾಗೆ ಹೊಕ್ಕಳಿನಿಂದ ಕೆಳಕ್ಕೆ ಎದ್ದು ಕಾಣುತ್ತದೆ.

​ಹೊಲಿಗೆಯ ವಿಧಾನಗಳು:
ಸಿಸೇರಿಯನ್ ಹೆರಿಗೆಯಲ್ಲಿ ನಿಮ್ಮ ಗರ್ಭಾಶಯವನ್ನು ಮುಚ್ಚಲು ಕರಗಬಲ್ಲ ಹೊಲಿಗೆಗಳನ್ನು ಬಳಸಲಾಗುತ್ತದೆ. ಆದ್ದರಿಂದ ಗಾಯವು ಗುಣವಾಗುತ್ತಿದ್ದಂತೆ ಅವು ಕ್ರಮೇಣ ಕರಗುತ್ತವೆ. ಶಸ್ತ್ರಚಿಕಿತ್ಸೆಯ ನಂತರ ಚರ್ಮವನ್ನು ಮುಚ್ಚಲು ಶಸ್ತ್ರಚಿಕಿತ್ಸಕರು ತಮ್ಮ ಅನುಭವದ ಮೇರೆಗೆ ಹಲವಾರು ವಿಧಾನಗಳಲ್ಲಿ ಒಂದು ವಿಧಾನವನ್ನು ಬಳಸಬಹುದು. ಕೆಲವು ವೈದ್ಯರು ಸ್ಟೇಪ್ಲರ್ ಗಳನ್ನು ಬಳಸಲು ಬಯಸುತ್ತಾರೆ. ಏಕೆಂದರೆ ಇದು ವೇಗವಾದ ಮತ್ತು ಸರಳ ವಿಧಾನವಾಗಿದೆ. ಆದರೆ ಇತರರು ಸೂಜಿ ಮತ್ತು ದಾರವನ್ನು (ಕರಗಿಸಲಾಗದ ಹೊಲಿಗೆಗಳು) ಬಳಸಿ ಚರ್ಮವನ್ನು ಮುಚ್ಚುತ್ತಾರೆ. ಆದರೂ ಈ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಂದಾಜು 30 ನಿಮಿಷಗಳಾಗಬಹುದು.
ನಿಮಗೆ ಸ್ಟೇಪ್ಲರ್ ಗಳನ್ನು ಬಳಸಿದರೆ ಅವುಗಳನ್ನು ಒಂದು ವಾರದ ನಂತರ ಅದಾಗಿ ಕರಗುವ ಹಾಗೆ ವೈದ್ಯರು ಹೊಲಿಗೆ ಹಾಕಿರುತ್ತಾರೆ ಮತ್ತು ಕೆಲವು ಸಲ ವೈದ್ಯರೇ ತೆಗೆದುಹಾಕುತ್ತಾರೆ. ಗಾಯಕ್ಕೆ ಪ್ಲಾಸ್ಟರ್ ಮಾಡುವುದರ ಮೂಲಕ ಯಾವುದೇ ಸೋಂಕು ತಗುಲದ ಹಾಗೆ ರಕ್ಷಣಾತ್ಮಕ ಹೊದಿಕೆಯಾಗಿ ಗಾಯವನ್ನು ಮುಚ್ಚುತ್ತಾರೆ. ಇದು ಗಾಯವನ್ನು ಕಲೆರಹಿತವಾಗಿ ವಾಸಿಯಾಗಲು ಸಹಾಯಕ.

ಸಡಿಲವಾದ ಬಟ್ಟೆಗಳನ್ನು ಧರಿಸಿ:
ಐವಿಎಫ್, ಅವಳಿ ಮಕ್ಕಳು, ವಯೋಮಿತಿ ಹೆಚ್ಚಿರುವ ಮಹಿಳೆಯರು ಗರ್ಭಧರಿದಾಗ, ಕೆಲವು ಸಂಕೀರ್ಣತೆ ಇರುವ ಗರ್ಭಿಣಿಯರಿಗೆ ಸಿ-ಸೆಕ್ಷನ್ ಸುರಕ್ಷಿತ ಕಾರ್ಯ ವಿಧಾನ ಎಂದೇ ಹೇಳಬಹುದು. . ಆದರೆ ಇದು ಪ್ರಮುಖ ಶಸ್ತ್ರಚಿಕಿತ್ಸೆಯಾಗಿದ್ದು, ಗಾಯ ಮತ್ತು ಸೋಂಕನ್ನು ತಡೆಗಟ್ಟಲು ಸರಿಯಾಗಿ ಕಾಳಜಿ ವಹಿಸುವುದು ಬಹಳ ಮುಖ್ಯ. ಶಸ್ತ್ರಚಿಕಿತ್ಸೆಯಾದ ಜಾಗದಲ್ಲಿ ಪ್ರತಿದಿನ ಸ್ವಚ್ಛಗೊಳಿಸಿ. ನಿಮಗೆ ಆ ಜಾಗದಲ್ಲಿ ಸ್ವಲ್ಪ ಸಮಯದವರೆಗೆ ನೋವಿರುತ್ತದೆ. ಆದರೂ ನೀವು ಆ ಜಾಗವನ್ನು ಸ್ವಚ್ಛವಾಗಿರಿಸಬೇಕಾಗುತ್ತದೆ. ಸ್ನಾನ ಮಾಡುವಾಗ ಗಾಯ ಕಡಿಮೆಯಾಗಲು ನೀರು ಮತ್ತು ಸಾಬೂನು ಬಳಸಬಹುದು ಅಥವಾ ಬಟ್ಟೆಯಿಂದ ನಿಧಾನವಾಗಿ ತೊಳೆಯಿರಿ. ಡಯಾಬಿಟಿಸ್ ಇರುವವರು ಮಧುಮೇಹದ ಹತೋಟಿಯಲ್ಲಿ ಇಡಬೇಕಾಗುತ್ತದೆ.
ಯಾವುದೇ ಕಾರಣಕ್ಕೆ ಆದರೆ ಸ್ಕ್ರಬ್ ಮಾಡಬೇಡಿ. ಟವೆಲ್’ನಿಂದ ನಿಧಾನವಾಗಿ ಒರೆಸಿ. ಸಡಿಲವಾದ ಬಟ್ಟೆಗಳನ್ನು ಧರಿಸಿ. ಬಿಗಿಯಾದ ಬಟ್ಟೆ ಧರಿಸಿದರೆ ಆಪರೇಶನ್ ಜಾಗದಲ್ಲಿ ಕೆರೆತ ಉಂಟಾಗಬಹುದು. ಆದ್ದರಿಂದ ಜೀನ್ಸ್ ಅನ್ನು ಬಿಟ್ಟು ಪೈಜಾಮಾ, ನೈಟ್ ಗೌನ್, ಫ್ರಾಕ್ , ಜಾಗಿಂಗ್ ಪ್ಯಾಂಟ್ ಅಥವಾ ಇತರ ಸಡಿಲವಾದ ಬಟ್ಟೆಗಳನ್ನು ಆರಿಸಿಕೊಳ್ಳಿ. ಸಡಿಲವಾದ ಬಟ್ಟೆಗಳಲ್ಲಿ ಗಾಳಿಯಾಡುವುದರಿಂದ ಇದು ಗಾಯ ಬೇಗ ಗುಣಪಡಿಸಲು ಸಹಾಯ ಮಾಡುತ್ತದೆ.

ಸಿ-ಸೆಕ್ಷನ್ ಬಗ್ಗೆ ಹೆದರದಿರಿ:
ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೆ ಗರ್ಭಧಾರಣೆಯ ಅವಧಿಯಲ್ಲಿ ಸಿ-ಸೆಕ್ಷನ್ ಬಗ್ಗೆ ಹಲವಾರು ರೀತಿಯ ಅನುಮಾನ ಮತ್ತು ಭಯ ಆವರಿಸಿಕೊಂಡಿರುತ್ತದೆ. ಇದಕ್ಕೆ ಕಾರಣ ಬಹಳಷ್ಟು ಹಿರಿಯರು ಸಾಮಾನ್ಯ ಹೆರಿಗೆಗೆ ಮತ್ತು ಸಿ-ಸೆಕ್ಷನ್ ಗೆ ಇರುವ ವ್ಯತ್ಯಾಸವನ್ನು ಆವಾಗಾವಾಗ ಹೇಳುತ್ತಿರುತ್ತಾರೆ. ಈ ಅವಧಿಯಲ್ಲಿ ಮನಸ್ಸು ತುಂಬಾ ಸೂಕ್ಷ ಇರುವ ಗರ್ಭಿಣಿಯರಿಗೆ ಅವರ ಅಮಾತುಗಳು ತುಂಬಾ ಭಯ ಹುಟ್ಟಿಸುವ ರೀತಿಯಲ್ಲಿ ಇರುತ್ತದೆ. ಸಂಕೀರ್ಣತೆ ಇರುವ ಗರ್ಭಿಣಿಯರಿಗೆ ಸಿ-ಸೆಕ್ಷನ್ ತಾಯಿ ಮತ್ತು ಮಗುವನ್ನು ಸುರಕ್ಷಿತವಾದ ಪ್ರಸವಕ್ಕೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯ ಹೆರಿಯಯಲ್ಲಿ ಮಗುವಿನ ಸ್ಥಾನ ಮತ್ತು ತಾಯಿಯ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದಿದ್ದರೆ ಮಾತ್ರ ವೈದ್ಯರು ಯಾವುದೇ ಗೊಂದಲವಿಲ್ಲದೇ ಪ್ರಸವಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ಸಿ-ಸೆಕ್ಷನ್ ನಲ್ಲಿ ಹಾಗಲ್ಲ. ತಾಯಿಯ ಆರೋಗ್ಯವನ್ನು ಸ್ಥಿರತೆಯಲ್ಲಿ ನೋಡಿಕೊಂಡು , ಮಗುವನ್ನು ಸ್ಕ್ಯಾನಿಂಗ್ ಮೂಲಕ ಮಾನಿಟರ್ ಮಾಡಿ ಪ್ರಸವದ ದಿನವನ್ನು ಗುರುತು ಮಾಡಲಾಗುವುದು.

​ಗಾಯ ಬೇಗ ಗುಣವಾಗಲು ಹೀಗೆ ಮಾಡಿ

ದೇಹದ ತೂಕವನ್ನು ಕಡಿಮೆ ಮಾಡಲು ನೀವು ಸಿದ್ಧರಾಗಿದ್ದರೂ ವ್ಯಾಯಾಮ ಮಾಡಬೇಡಿ. ಭಾರದ ವಸ್ತುವನ್ನೂ ಎತ್ತುವುದು, ವಿಶ್ರಾಂತಿ ತೆಗೆದುಕೊಳ್ಳದೇ ನಡೆದಾಡುವುದು, ಹೀಗೆ ಬಹಳಷ್ಟು ತಪ್ಪುಗಳನ್ನು ಮಾಡದಿರಿ. ಯಾವುದೇ ರೀತಿಯ ದೈಹಿಕ ಕಸರತ್ತು, ಯೋಗವನ್ನು ಮಾಡುವುದಾದರೆ ವೈದ್ಯರ ಸಲಹೆ ಸೂಚನೆಯ ನಂತರ ಮುಂದುವರೆಸಿ. ಹೆಚ್ಚು ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಹೊಲಿಗೆ ಹಾಕಲಾದ ಜಾಗಕ್ಕೆ ತೊಡಕಾಗಬಹುದು.ಗಾಯ ಬೇಗ ಒಣಗದೇ , ಹೊಲಿಗೆ ಬಿಟ್ಟುಕೊಳ್ಳಬಹುದು. ವಿಶೇಷವಾಗಿ, ವಸ್ತುಗಳನ್ನು ಬಾಗಿ ಮೇಲೆತ್ತುವಾಗ ಮತ್ತು ಎಸೆಯುವಾಗ ಜಾಗರೂಕರಾಗಿರಿ. ನಿಮ್ಮ ಮಗುವಿಗಿಂತ ಭಾರವಾದ ಯಾವುದನ್ನೂ ಎತ್ತಬೇಡಿ. ಸಿ-ಸೆಕ್ಷನ್ ನಂತರ ವೈದ್ಯರು ಹೇಳಿರುವ ದಿನಾಂಕದಂದು ತಪಾಸಣೆಗೆ ಆಸ್ಪತ್ರೆಗೆ ಭೇಟಿ ಮಾಡಿರಿ. ಏಕೆಂದರೆ ನಿಮ್ಮನ್ನು ಅವರು ಪರಿಶೀಲಿಸಿ ಮುಂದಿನ ಔಷಧಿಯನ್ನು ಸೂಚಿಸುತ್ತಾರೆ.
ನಿಮಗೆ ಶಸ್ತ್ರಚಿಕಿತ್ಸೆ ನಡೆದಲ್ಲಿ ಏನಾದರೂ ನೋವು ಕಾಣಿಸಿಕೊಂಡರೆ, ಹೀಟ್ ಕಂಪ್ರೆಸ್ಸರ್ ಕೊಡುವುದರರಿಂದ ನೋವು ಕಡಿಮೆಯಾಗುತ್ತದೆ. ಆದ್ದರಿಂದ ನಿಮ್ಮ ಹೊಟ್ಟೆಗೆ 15 ನಿಮಿಷಗಳ ಮಧ್ಯಂತರದಲ್ಲಿ ಹೀಟಿಂಗ್ ಪ್ಯಾಡ್ ಅನ್ನು ಒತ್ತಿ. ಹಾಗೆಯೇ ನೋವು ನಿವಾರಕಗಳನ್ನು ತೆಗೆದುಕೊಳ್ಳಿ. ಇದು ಸಿ-ಸೆಕ್ಷನ್ ನಂತರದ ನೋವನ್ನು ಕಡಿಮೆ ಮಾಡುತ್ತದೆ. ನಿಮ್ಮ ವೈದ್ಯರು ಐಬುಪ್ರೊಫೇನ್ (ಅಡ್ವಿಲ್), ಅಸೆಟಾಮಿನೋಫೆನ್ (ಟೈಲೆನಾಲ್) ಅಥವಾ ಪ್ರಿಸ್ಕ್ರಿಪ್ಷನ್ ನೋವು ನಿವಾರಕವನ್ನು ಶಿಫಾರಸ್ಸು ಮಾಡಬಹುದು.

ನೀವೇನು ಮಾಡಬೇಕು.
ಸಿ-ಸೆಕ್ಷನ್ ಹೆರಿಗೆಯಾದವರು ಗುಣವಾಗಲು ಸುಮಾರು ನಾಲ್ಕರಿಂದ ಆರು ವಾರಗಳು ಬೇಕಾಗುತ್ತದೆ. ಸಿ-ಸೆಕ್ಷನ್ ನಂತರ ನೀವು ಸ್ವಲ್ಪ ದುರ್ಬಲರು ಆಗಬಹುದು, ಅಸ್ವಸ್ಥತೆ ಮತ್ತು ಆಯಾಸವೂ ಸಾಮಾನ್ಯವಾಗಿರುತ್ತದೆ. ಮೊದಲ ಎರಡು ವಾರಗಳವರೆಗೆ ನಿಮ್ಮ ಮಗುವಿಗಿಂತ ಭಾರವಾದ ಯಾವುದೇ ವಸ್ತುವನ್ನು ಎತ್ತಬೇಡಿ. ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ನಿಮಗೆ ಮತ್ತು ನಿಮ್ಮ ಮಗುವಿಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ನೀವಿರುವ ಜಾಗದಲ್ಲೇ ಇರಿಸಿಕೊಳ್ಳಿ. ನೀವು ಕೆಮ್ಮುವಾಗ, ಸೀನುವಾಗ, ನಗುವಾಗ ನಿಮ್ಮ ಹೊಟ್ಟೆಯನ್ನು , ಶಸ್ತ್ರಚಿಕಿತ್ಸೆಯಾದ ಜಾಗದ ಬಳಿ ಹಿಡಿದುಕೊಳ್ಳಿ.
ನಿಮಗೆ ಅಗತ್ಯವಿದ್ದರೆ ಮಾತ್ರ ವೈದ್ಯರನ್ನು ಕೇಳಿ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ.
ಒಂದು ವೇಳೆ ಆಪರೇಶನ್ ಆದ ಜಾಗದಲ್ಲಿ ಕೆಂಪು ಬಣ್ಣ ಕಂಡುಬಂದರೆ, ಊದಿಕೊಂಡರೆ, ಹೆಚ್ಚಿನ ಜ್ವರ ಇದ್ದರೆ, ಹೆಚ್ಚು ನೋವನ್ನು ಅನುಭವಿಸಿದರೆ. ಈ ತರಹದ ಯಾವುದೇ ಚಿಹ್ನೆಗಳು ಕಂಡುಬಂದರೆ ತಕ್ಷಣ ನಿಮ್ಮ ವೈದ್ಯರಿಗೆ ಕರೆ ಮಾಡಿ
ಜ್ವರ, ಚಳಿ, ಸುಸ್ತು, ಬೇಧಿ, ಇವೇ ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.
ಪ್ರಸವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಯಾವುದೇ ಸಂಕೀರ್ಣತೆ , ಕ್ಲಿಷ್ಟತೆ ಇರುವ ಗರ್ಭಧಾರಣೆಯಲ್ಲಿ ಸುರಕ್ಷಿತವಾಗಿ ಮಗುವನ್ನು ಪ್ರಸವವಾಗಲು, ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಲು ಸಿ-ಸೆಕ್ಷನ್ ಸುರಕ್ಷಿತವಾಗಿದೆ. ಈ ಬಗ್ಗೆ ಈ ಲೇಖನ ನಿಮಗೆ ಇಷ್ಟವಾದರೆ, ಲೈಕ್ ಮಾಡಿ, ಶೇರ್ ಮಾಡಿ ಮತ್ತು ಕಾಮೆಂಟ್ ಮಾಡುವುದರ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ನೀಡಿರಿ.

#mummy #mummyhealth #motherhealth #benefit #celebratingmotherhood #breastfeedingmothers

A

gallery
send-btn

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.